Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

63 ವರ್ಷದ ವೃದ್ಧನಿಗಿರುವ ಕಳಕಳಿ ನಮಗೇಕಿಲ್ಲ..?

ಟೀಮ್​ ವೈ.ಎಸ್​. ಕನ್ನಡ

63 ವರ್ಷದ ವೃದ್ಧನಿಗಿರುವ ಕಳಕಳಿ ನಮಗೇಕಿಲ್ಲ..?

Thursday June 30, 2016 , 2 min Read

ಸುನಾಮಿ, ಬರ ಮತ್ತು ಪ್ರಕೃತಿಯ ವಿಕೋಪಗಳು ಮನುಕುಲಕ್ಕೆ ಸಾಕಷ್ಟು ಕಂಟಕವಾಘಿ ಪರಿಣಮಿಸಿದೆ. ಪ್ರಕೃತಿ ಮನುಷ್ಯನ ಮೇಲೆ ಹೀಗೇ ಕೋಪಿಸಿಕೊಂಡ್ರೆ ಮುಂದೇನು ಗತಿ ಅನ್ನೋ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತದೆ. ಅದ್ರಲ್ಲೂ ವಾಯು ಮಾಲಿನ್ಯ ತಡೆಗಟ್ಟುವ ಬಗ್ಗೆ ಹೊಸ ಹೊಸ ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ. ಆದ್ರೆ ಅದ್ಯಾವುದನ್ನೂ ಕಟ್ಟುನಿಟ್ಟಾಗಿ ಪಾಲಿಸೋದಿಕ್ಕೆ ಆಗ್ತಿಲ್ಲ.

ಹವಾಮಾನದಲ್ಲಿ ಏರುಪೇರುಗಳಾಗ್ತಿವೆ. ಜಾಗತಿಕ ತಾಪಮಾನದಲ್ಲಿ ಇನ್ನಿಲ್ಲದ ಬದಲಾವಣೆಗಳಾಗುತ್ತಿದೆ, ಜೀವಸಂಕುಲದ ಮೇಲೆ ಪ್ರಭಾವ ಬೀರುತ್ತಿದೆ ಅನ್ನು ಕೂಗು, ಆತಂಕಗಳು ವಿಶ್ವಮಟ್ಟದಲ್ಲಿ ಕೇಳಿಬರುತ್ತಿವೆ. ಕೈಗಾರಿಗಳು ವಿಪರೀತವಾಗಿ ನಂಬಿಕೊಂಡಿರುವ ಕಲ್ಲಿದ್ದಲಿನ ಬಳಕೆಯನ್ನ ಸಾಧ್ಯವಾದಷ್ಟು ತಗ್ಗಿಸಲು ನಿರ್ಧರಿಸಲಾಗಿದೆ. ಅಲ್ಲದೆ ವಿಕಿರಣ ಸೂಸುವ ಕೈಗಾರಿಕೆಗಳ ಮೇಲೂ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಯುತ್ತಿದೆ.

ನಮ್ಮ ಸುತ್ತಲೂ ಇರುವ ಸಾಮಾನ್ಯರಲ್ಲಿ ಮಾಲಿನ್ಯದ ಬಗ್ಗೆ ಎಷ್ಟರ ಮಟ್ಟಿಗೆ ಕಳಕಳಿ ಇದೆ ಅನ್ನುವುದು ಯಕ್ಷ ಪ್ರಶ್ನೆ. ಕೆಲವರಿಗೆ ಈ ಮಾಲಿನ್ಯ, ಇಂಧನಗಳು ಇವುಗಳ ಯಾವುದರ ಬಗ್ಗೆಯೂ ಅರಿವೇ ಇರುವುದಿಲ್ಲ. ಇನ್ನು ಕೆಲವರು ಸೈಲೆಂಟಾಗೇ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಾ, ತಮ್ಮ ಕನಿಷ್ಠ ಜವಾಬ್ದಾರಿ ನಿಭಾಯಿಸುವ ಪ್ರಯತ್ನ ನಡೆಸುತ್ತಿರುತ್ತಾರೆ. ಅಂತಹ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು ಬೆಂಗಳೂರು ಮೂಲದ ಸಯ್ಯದ್ ಸಜ್ಜದ್ ಅಹ್ಮದ್..

image


ವಯಸ್ಸು 63 ಆದ್ರೆ. ಮಾಡಲು ಹೊರಟಿರುವ ಜನಜಾಗೃತಿ ಬೆಟ್ಟದಂತದ್ದು. ಇಳಿವಯಸ್ಸಿನಲ್ಲೂ ಪರಿಸರದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಸಯ್ಯದ್ ಸಜ್ಜದ್, ಇದೀಗ ವಾಯುಮಾಲಿನ್ಯ ಹಾಗೂ ನವೀಕರೀಸಬಹುದಾದದ ಇಂಧನ ಶಕ್ತಿಗಳ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಇದಕ್ಕಾಗಿ ಸಯ್ಯದ್ ಬೆಂಗಳೂರಿನಿಂದ ರಾಜಧಾನಿ ದೆಹಲಿವರೆಗೆ ತಾವೇ ನಿರ್ಮಿಸಿರುವ ಸೋಲಾರ್ ಪವರ್ ಕಾರಿನಲ್ಲಿ ಪ್ರಯಾಣ ಹೊರಟಿದ್ದಾರೆ. ನವೆಂಬರ್ 1ರಂದು ಪ್ರಯಾಣ ಶುರುಮಾಡಿರುವ ಸಜ್ಜದ್ ಪರಿಸರ ಸಂರಕ್ಷಣೆ ಹಾಗೂ ಪುನರ್ ನವೀರಣಗೊಳಿಸಬಹುದಾದ ಇಂಧನಗಳ ಮಾಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷ ಅಂದರೆ ಸಯ್ಯದ್ ಸಜ್ಜದ್ ದಿವಂಗತ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ತಮ್ಮ ಈ ಸಾಮಾಜಿಕ ಕಾರ್ಯಕ್ರಮವನ್ನ ಅರ್ಪಿಸಿದ್ದಾರೆ. ಅವರ ಪೊಲ್ಯುಷನ್ ಫ್ರೀ ಇಂಡಿಯಾ ವಿಜನ್ ನಿಂದ ಪ್ರೇರಿತರಾಗಿರುವ ಈ ಸಜ್ಜದ್ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ: ರಂಜಾನ್ ತಿಂಗಳಲ್ಲೊಂದು ಪವಿತ್ರ ಕೆಲಸ- ಅರಬ್ ದೇಶಗಳಲ್ಲಿ ಸುಮಯ್ಯ ಹೊಸ ಸಾಹಸ

ಇಳಿವಯಸ್ಸಿನಲ್ಲೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಯ್ಯದ್ ಅವರ ಲೈಫ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಬಾಲ್ಯದಲ್ಲಿ ತನಗೆ ಹೆಚ್ಟು ಓದಲು ಸಾಧ್ಯವಾಗದೇ ಹೋದ್ರೂ ತಮ್ಮ ಇಬ್ಬರು ಮಕ್ಕಳಿಗೆ ಕಾನೂನು ಶಿಕ್ಷಣ ಕೊಡಿಸಿದ್ದಾರೆ. ಅಲ್ಲದೆ ತಮ್ಮ ಕೆಲಸದಲ್ಲೂ ಕ್ರಿಯೇಟಿವ್ ಆಗಿದ್ದ ಸಯ್ಯದ್ ಬೆಂಗಳೂರಿನಲ್ಲಿ ಹಣ್ಣಿನ ಅಂಗಡಿಯನ್ನ ಇಟ್ಟುಕೊಂಡಿದ್ರು. ಕ್ರಮೇಣ ಟಿವಿ ರಿಪೇರಿ ಕೆಲಸವನ್ನೂ ಮಾಡಿದ್ರು. ಅಲ್ಲದೆ ವಿಕಲ ಚೇತನರಿಗಾಗಿ ಮೂರು ಹಾಗೂ ಎರಡು ಚಕ್ರದ ವಾಹನಗಳನ್ನ ಸ್ವತಃ ನಿರ್ಮಿಸಿಕೊಟ್ಟ ಹೆಗ್ಗಳಿಕೆಯೂ ಇವರಿಗಿದೆ. ಇವರ ಸ್ವಂತ ಮಗಳೂ ವಿಕಲಚೇತನೆಯಾಗಿದ್ದು ಆಕೆಗೆ ಇವರೇ ವಾಹನ ತಯಾರಿಸಿಕೊಟ್ಟಿದ್ದಾರೆ. ಇನ್ನು ಇವರು ಸೋಲಾರ್ ಪವರ್ ನ ಕಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದರ ತಯಾರಿಕೆಗೆ ಸುಮಾರು ಒಂದು ವರ್ಷ ಕಾಲ ತೆಗೆದುಕೊಂಡಿದ್ದಾರೆ. ಅದ್ಭುತ ಪರಿಕಲ್ಪನೆಯಾಗಿ ನಿರ್ಮಿತವಾಗಿರುವ ಇವರ ಕಾರು ಗಂಟೆಗೆ 2 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

ಸಯ್ಯದ್ ಸಜ್ಜದ್ ಅಹ್ಮದ್ ಅವರ ಸಾಧನೆಯನ್ನ ಗುರುತಿಸಿರುವ ಸಂಘ ಸಂಸ್ಥೆಗಳು ಹಲವು ಗೌರವಗಳನ್ನ ಸಲ್ಲಿಸಿವೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಇವರ ಸಾಧನೆ ಗುರುತಿಸಲ್ಪಟ್ಟಿದೆ. 2006ರ ವಿಶ್ವ ಪರಿಸರ ದಿನದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದಿಷ್ಟೇ ಅಲ್ಲದೆ 2012ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲೂ ಇವರು ಭಾಗವಹಿಸಿದ್ರು. ಇದಕ್ಕಾಗಿ ದಕ್ಷಿಣ ಭಾರತದಲ್ಲಿ 1000 ಕಿಲೋಮಿಟರ್ ದೂರ ಸಂಚರಿಸಿದ್ರು. ಇದೀಗ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಹೈದ್ರಾಬಾದ್, ಭೂಪಾಲ್, ಝಾನ್ಸಿ ಹಾಗೂ ಆಗ್ರಾ ಮೂಲಕ ದೆಹಲಿಗೆ 1740 ಕಿಲೋಮೀಟರ್ ದೂರ ಪ್ರಯಾಣಿಸುತ್ತಿರುವ ಸಯ್ಯದ್ ಸಜ್ಜದ್ ಅಹ್ಮದ್ ಗೆ ನಮ್ಮ ಹ್ಯಾಟ್ಸಫ್. 

ಇದನ್ನು ಓದಿ:

 1. ಮ್ಯಾಜಿಕ್​ ಅಲ್ಲ... ಕಾರು ಓಡೋದಿಕ್ಕೆ ಪೆಟ್ರೋಲ್​, ಡೀಸೆಲ್​ ಯಾವುದೂ ಬೇಡ..!

2. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮರುಬಳಕೆ - ವಿಜ್ಞಾನಿಗಳಿಂದ ಡೀಸೆಲ್ ತಯಾರಿಕೆ

3. 68ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ - ನೇಪಾಳದ ಹಿರಿಯ ವಿದ್ಯಾರ್ಥಿ ದುರ್ಗಾ ಕಮಿ