Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

ಟೀಮ್​ ವೈ.ಎಸ್​. ಕನ್ನಡ

ವಯಸ್ಸಿನಲ್ಲೇನಿದೆ..? 
ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

Thursday July 07, 2016 , 3 min Read

ಏನಾದರೂ ಮಾಡಬೇಕು, ಸಾಧಿಸಬೇಕು ಅನ್ನೋ ಛಲವಿದ್ದರೆ ಅದಕ್ಕೆ ವಯಸ್ಸಿನ ಅಡ್ಡಿ ಇರುವುದಿಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಬೆಂಗಳೂರಿನ ಹೆಬ್ಬಾಳದ ನಿವಾಸಿ 76 ವರ್ಷದ ಚಂದ್ರಮತಿ. ಹೌದು, ವಯಸ್ಸು 60 ದಾಟುತ್ತಲೇ ಮಹಿಳೆಯರು ಮಕ್ಕಳು, ಮೊಮ್ಮಕ್ಕಳು, ಕುಟುಂಬ, ಧ್ಯಾನ, ಪೂಜೆ, ಬೆಳಗ್ಗೆ ಸಂಜೆ ವಾಯುವಿಹಾರ, ತೀರ್ಥಯಾತ್ರೆ ಅಂತೆಲ್ಲಾ ತಮ್ಮದೇ ಜೀವನದಲ್ಲಿ ಮುಳುಗಿಬಿಡುತ್ತಾರೆ. ಆದರೆ ಚಂದ್ರಮತಿ ಅವರು ಬೇರೆ ಮಹಿಳೆಯರಂತಲ್ಲ. ಅವರು ಈ ಹಿರಿಯ ವಯಸ್ಸಿನಲ್ಲಿ ‘ಮೈ ಅಮ್ಮಾಸ್ ಹೋಮ್ ಮೇಡ್’ ಎಂಬ ಉದ್ಯಮ ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆ ಮೂಲಕ ಉದ್ಯಮಿಯಾಗಲು ವಯಸ್ಸು ಮುಖ್ಯವಲ್ಲ, ಬದಲಾಗಿ ಛಲ ಮತ್ತು ಗುರಿ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗೇ ಹಲವರಿಗೆ ಮಾದರಿಯಾಗಿದ್ದಾರೆ.

image


ಹೇಗೆ ಪ್ರಾರಂಭವಾಯ್ತು ‘ಮೈ ಅಮ್ಮಾಸ್ ಹೋಮ್ ಮೇಡ್’..?

ಚಂದ್ರಮತಿಯವರ ಪತಿ ನಾಗರಾಜ್ ಕಳೆದ ಡಿಸೆಂಬರ್‍ನಲ್ಲಿ ನಿಧನ ಹೊಂದಿದರು. ಆ ನಂತರ ಚಂದ್ರಮತಿಯವರಿಗೆ ಒಂಟಿತನ ಕಾಡತೊಡಗಿತು. ಆ ಒಂಟಿತನದ ನೋವಿನಿಂದ ಹೊರಬರಲು ಅವರು ಸ್ಥಾಪಿಸಿದ್ದೇ ಈ ‘ಮೈ ಅಮ್ಮಾಸ್ ಹೋಮ್ ಮೇಡ್’. ಹೀಗೆ ಏನಾದರೂ ಕೆಲಸ ಮಾಡುತ್ತಿದ್ದರೆ, ಸಮಯ ಕಳೆಯುತ್ತದೆ. ಏನೋ ಮಾಡುತ್ತಿದ್ದೀನಲ್ಲಾ ಎಂಬ ನೆಮ್ಮದಿ ಕೂಡ ಸಿಗುತ್ತದೆ ಎಂಬ ಆಲೋಚನೆ ಅವರದು. ಹೀಗಾಗಿಯೇ ಅಡುಗೆಗೆ ಉಪಯೋಗಿಸುವ ಮಸಾಲೆ ಪದಾರ್ಥಗಳನ್ನು ಮನೆಯಲ್ಲೇ ರೆಡಿಮೇಡ್ ಸಿದ್ಧಪಡಿಸಿ ಮಾರಾಟ ಮಾಡುವ ಐಡಿಯಾ ಮಾಡಿದರು. ಅದಕ್ಕೆ ಮನೆಯವರಿಂದಲೂ ಬೆಂಬಲ ದೊರೆಯಿತು. ಹೀಗಾಗಿ ಹೆಚ್ಚು ತಡ ಮಾಡದೇ ಇದೇ ಫೆಬ್ರವರಿಯಲ್ಲಿ, 76 ಅಜ್ಜಿ ‘ಮೈ ಅಮ್ಮಾಸ್ ಹೋಮ್ ಮೇಡ್’ ಪ್ರಾರಂಭಿಸಿಯೇಬಿಟ್ಟರು.

image


ಅಮ್ಮನ ಕೈ ರುಚಿ...

ಅಡುಗೆ ಮನೆಯಲ್ಲಿ ತಯಾರಾಗುವ ತರಹೇವಾರಿ ರುಚಿಕರವಾದ ಆಹಾರ ಪದಾರ್ಥಗಳಿಗೆ ಮಸಾಲೆ ಬೇಕೇಬೇಕು. ಹಲವು ಬ್ರಾಂಡ್‍ಗಳ ರೆಡಿಮೇಡ್ ಮಸಾಲೆ ಪಾಕೆಟ್‍ಗಳು ಸಿಗುತ್ತವಾದರೂ, ಅವು ಮನೆಯಲ್ಲಿ ಅಮ್ಮ ಮಾಡುವ ಮಸಾಲೆ ರುಚಿಯಂತೆ ಇರುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾವಯವ, ಹಳೆಯ ಪದ್ಧತಿಗಳ ಕಡೆಗೆ ಜನರ ಆಸಕ್ತಿ ಬೆಳೆಯುತ್ತಿದ್ದು, ಪ್ಯಾಕಿಂಗ್ ಉತ್ಪನ್ನಗಳಿಗಿಂತ ಕಣ್ಣೆದುರು ತಯಾರಾಗುವ ಪದಾರ್ಥಗಳ ಮೇಲೆ ಹೆಚ್ಚು ಒಲವಿರುತ್ತದೆ. ಅಲ್ಲದೆ ಹೊರಗೆ ಹೋಟೆಲ್ ತಿಂಡಿ ತಿಂದು ಬೇಸತ್ತ ಮಂದಿ ಯಾವಾಗ ಅಮ್ಮ ಮಾಡಿದ ಅಡುಗೆ ತಿನ್ನುತ್ತೀನೋ ಎನ್ನುತ್ತಿರುತ್ತಾರೆ. ಅಂಥವರಿಗೆ ಚಂದ್ರಮತಿ ಅವರು ‘ಮೈ ಅಮ್ಮಾಸ್ ಹೋಮ್‍ಮೇಡ್’ ಮೂಲಕ ಅಮ್ಮನ ಕೈರುಚಿಯನ್ನು ನೀಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಖಾದ್ಯಗಳಿಗಾಗಿ ಚಂದ್ರಮತಿ ಅವರ ಕೈರುಚಿ ಸವಿಯಲೇಬೇಕು.

image


ವಿಶೇಷ ಅಂದರೆ ಸಿಲ್ವರ್ ಸರ್ಫರ್ ಎಂಬ ಸ್ವಯಂಸೇವಾ ಸಂಸ್ಥೆ ಹಿರಿಯ ನಾಗರಿಕರ ಕಾರ್ಯಗಳನ್ನು ಪರಿಚಯಿಸಲು ಆಯೋಜಿಸುವ ಮೇಳದಲ್ಲಿ ಎರಡು ಬಾರಿ ಪಾಲ್ಗೊಂಡು ತಾವು ಸಿದ್ಧಪಡಿಸಿದ ಆಹಾರೋತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಿದ್ದರು ಚಂದ್ರಮತಿ. ಆ ಮೂಲಕ ಅವರಿಗೆ ತಮ್ಮಂತೆಯೇ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವು ಹಿರಿಯ ತಲೆಗಳು ಪರಿಚಯವಾದವು. ಹೀಗೆ ಚಂದ್ರಮತಿ ಅವರ ಉದ್ಯಮಕ್ಕೂ ಹೆಚ್ಚು ಜನರನ್ನು ತಲುಪಿತು ಹಾಗೂ ‘ಮೈ ಅಮ್ಮಾಸ್ ಹೋಮ್‍ಮೇಡ್’ ಬ್ರಾಂಡ್‍ಗೆ ಒಂದೊಳ್ಳೆ ವೇದಿಕೆ ದೊರೆಯಿತು.

ಇದನ್ನು ಓದಿ: ಹಿರಿಜೀವಗಳ ಬದುಕಲ್ಲಿ ಆಶಾಕಿರಣ - ಸಂಗಾತಿ ಆಯ್ಕೆಗಾಗಿ ವಿವಾಹ ವೇದಿಕೆ

ಫೇಸ್‍ಬುಕ್‍ನಲ್ಲೆ ಆರ್ಡರ್..!

ವಿಶೇಷ ಅಂದರೆ ಈ ಹಿರಿಯಜ್ಜಿ ಚಂದ್ರಮತಿ ಅವರು ತಂತ್ರಜ್ಞಾನವನ್ನು ತುಂಬ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ‘ಮೈ ಅಮ್ಮಾಸ್ ಹೋಮ್‍ಮೇಡ್’ ಪೇಜ್ ಶುರು ಮಾಡಿ, ಆ ಮೂಲಕ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಅವರ ಸೊಸೆ ಶ್ರೀದೇವಿ ಈ ಪೇಜ್‍ನ ಉಸ್ತುವಾರಿ ವಹಿಸಿಕೊಂಡು, ಪ್ರಚಾರ ರಾಯಭಾರಿಯಾಗಿದ್ದಾರೆ. ಮಾತ್ರವಲ್ಲ ಶ್ರೀದೇವಿಯವರ ತಾಯಿ ಲಕ್ಷ್ಮೀ ಅವರೂ ಚಂದ್ರಮತಿ ಅವರೊಂದಿಗೆ ಕೈಜೋಡಿಸಿದ್ದಾರೆ. 76ರ ಹರೆಯದರಲ್ಲು ಪ್ರತಿದಿನ ಬರೊಬ್ಬರಿ 12 ತಾಸುಗಳ ಕಾಲ ಕೆಲಸ ಮಾಡುವುದು ಚಂದ್ರಮತಿ ಅವರ ಕೆಲಸದ ಮೇಲಿನ ಪ್ರೀತಿ ಹಾಗೂ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ. ಕೇವಲ ಬೆಂಗಳೂರಿನ ಜನ ಮಾತ್ರವಲ್ಲ ದೇಶ, ವಿದೇಶಗಳಲ್ಲೂ ‘ಮೈ ಅಮ್ಮಾಸ್ ಹೋಮ್‍ಮೇಡ್’ನ ಮಸಾಲೆ ಪದಾರ್ಥಗಳ ರುಚಿ ಕಂಡು ಹಲವಾರು ಮಂದಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಚಂದ್ರಮತಿಯವರನ್ನು ಶ್ಲಾಘಿಸಿದ್ದಾರೆ.

image


ಏನೇನು ಸಿಗುತ್ತದೆ?

‘ಮೈ ಅಮ್ಮಾಸ್ ಹೋಮ್‍ಮೇಡ್’ನಲ್ಲಿ ಹಲವು ವಿಧದ ಚಟ್ನಿ ಪುಡಿಗಳು, ಸಾಂಬಾರ್ ಪುಡಿ, ರಸಂ ಪುಡಿ, ಪುಳಿಯೊಗರೆ ಮಿಕ್ಸ್, ವಾಂಗಿಬಾತ್ ಪೌಡರ್, ಬಿಸಿಬೇಳೆ ಬಾತ್ ಪೌಡರ್, ರಾಗಿ ದೋಸೆ ಮಿಕ್ಸ್, ಮೆಂತೆ ಹಿಟ್ಟು, ಗೊಜ್ಜು ಪುಡಿ ಸೇರಿದಂತೆ 18 ಬಗೆಯ ಮಸಾಲೆ ಹಾಗೂ ಮಿಕ್ಸ್ ಆಹಾರ ಪದಾರ್ಥಗಳು ದೊರೆಯುತ್ತವೆ. 

ಚಂದ್ರಮತಿಯ ಸಾಹಸ ಉದ್ಯಮಿಗಳಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನೋದನ್ನ ತೋರಿಸಿದೆ. ಚಂದ್ರಮತಿಯ ಸಾಹಸ ಎಲ್ಲರಿಗೂ ಮಾದರಿ ಅನ್ನೋದರಲ್ಲಿ ಡೌಟೇ ಇಲ್ಲ.

ಇದನ್ನು ಓದಿ:

1. ಸವಿ ನೆನಪುಗಳಿಗೆ ಪುಸ್ತಕ ರೂಪ ನೀಡುವ ಆನ್​ಲೈನ್​ ಸೇವೆ..!

2. ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!

3. ಟೆಕ್ಕಿ ಹೈನುಗಾರನಾದ ಯಶೋಗಾಥೆ..!