Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

ಟೀಮ್​ ವೈ.ಎಸ್​.ಕನ್ನಡ

ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ-  ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

Friday July 15, 2016 , 2 min Read

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಂಡ ಹೆಂಡತಿ ಇಬರಿಗೂ ಕೆಲಸ ಇರುತ್ತದೆ. ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಇದರ ನಡುವೆ ಮಕ್ಕಳ ಶಾಲೆಗೆ ಹೋಗಿ ಅವರ ಶಾಲೆಯ ಫೀಸ್ ಕಟ್ಟಲು ಸಮಯವೇ ಇರುವುದಿಲ್ಲ. ಅಂತಹವರಿಗಾಗಿಯೆ ಮನೆಯಲ್ಲಿ ಕುಳಿತು ಫೀಸ್ ಕಟ್ಟುವ ಅವಕಾಶವನ್ನು ಕಲ್ಪಿಸಿಕೊಡಲು ಒಂದು ಸ್ಟಾರ್ಟ್ ಆಪ್ ಬಂದಿದೆ.

image


ಹೌದು ಪೋಷಕರ ಈ ಸಮಸ್ಯೆಗಳನ್ನೆಲ್ಲಾ ನಿವಾರಣೆ ಮಾಡಲು ಇನ್ಸ್ಟಾಫೀಸ್ ಎಂಬ ಹೆಸರಿನಲ್ಲಿ ಕೆಲ ಉತ್ಸಾಹಿಗಳು ಒಂದು ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ಇನ್ಸ್ಟಾಪೀಸ್ ಎಂಬ ಸಂಸ್ಥೆ ಇತ್ತು. ಅದೇ ಹೆಸರಿನಲ್ಲಿ ಒಂದು ವೆಬ್​ಸೈಟ್​​ ರೂಪಿಸಿ ಇದರಲ್ಲಿ ರಾಜ್ಯದ ಹಾಗೂ ದೇಶದ ಅನೇಕ ಶಾಲಾ ಕಾಲೇಜುಗಳ ಫೀಸ್ ವ್ಯವಸ್ಥೆಗೆ ಅನುಗುಣವಾಗುವಂತೆ ಮಾಡಿದ್ದಾರೆ.

ಗಿರೀಶ್ ಸವದತ್ತಿ, ರವಿ ಲಿಂಗನೂರಿ, ರಘುರಾಮ್ ಲಿಂಗನೂರಿ ಎಂಬ ಮೂವರು ಗೆಳೆಯರ ಸಾಹಸವೇ ಈ ಇನ್ಸ್ಟಾ ಫೀಸ್. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇನ್ಸ್ಟಾ ಫೀಸ್ ವೆಬ್​ಸೈಟ್ ರೂಪಿಸಿದ್ದಾರೆ.

image


ಇದರಲ್ಲಿ ಆಯಾ ಶಾಲಾಕಾಲೇಜುಗಳಿಗೆ ಸಂಬಂಧಿಸಿದಂತೆ ಅನೇಕ ಮಾದರಿಯ ಫೀಸ್​ಗಳ ಪಟ್ಟಿ, ದರ ಪಟ್ಟಿ, ಶಾಲೆಯ ವಿವರ, ಕಟ್ಟಲಿರುವ ಫೀಸ್​ ಪ್ರಮಾಣ ಲಭ್ಯವಿದೆ. ನೀವು ಮಕ್ಕಳನ್ನು ಸೇರಿಸಿರುವ ಶಾಲೆ ಈ ವೆಬ್​ಸೈಟ್​ನಲ್ಲಿ ರಿಜಿಸ್ಟರ್ ಆಗಿದ್ದರೆ ನೀವು ಆನ್​ಲೈನ್​ ಮೂಲಕ ಶಾಲಾ ಶುಲ್ಕವನ್ನು ಭರ್ತಿ ಮಾಡಬಹುದು.

ಫೀಸ್​​ ಭರಿಸುವುದು ಹೇಗೆ..?

ನೀವು ಶುಲ್ಕವನ್ನು ಕಟ್ಟುವುದಕ್ಕೆ ಮುನ್ನ ಒಂದು ಟೋಲ್ ಫ್ರೀ ನಂಬರ್​ಗೆ ಕರೆ ಮಾಡಿದರೆ ಅದರಲ್ಲಿ ನಿಮ್ಮ ಮಗು ಓದುತ್ತಿರುವ ಶಾಲೆಯ ವಿವರ ಪಡೆದುಕೊಳ್ಳುತ್ತಾರೆ. ನಂತರ ಅಲ್ಲಿಂದ ಒಂದು ಎಸ್ಎಂಎಸ್ ಬರುತ್ತದೆ. ಅದರಲ್ಲಿ ಶಾಲೆಗೆ ನೀವು ಕಟ್ಟಬೇಕಿರುವ ಶುಲ್ಕದ ಮಾಹಿತಿ, ಖಾತೆಯ ವಿವರ, ಮತ್ತಿತರ ಮಾಹಿತಿಗಳು ಲಭ್ಯವಿರುತ್ತವೆ. ಪೋಷಕರು ಶಾಲೆಯ ಫೀಸನ್ನುಯಾವುದೇ ಬ್ಯಾಂಕಿನಂದಲಾದರೂ ಕಟ್ಟಬಹುದು. ನೀವು ಕಟ್ಟಿದ ಹಣ ಇನ್ಸ್ಟಾಫೀಸ್​​ನಿಂದಾಗಿ ಶಾಲೆಗೆ ತಲುಪುತ್ತದೆ.

ಇದನ್ನು ಓದಿ: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮರುಬಳಕೆ - ವಿಜ್ಞಾನಿಗಳಿಂದ ಡೀಸೆಲ್ ತಯಾರಿಕೆ

ಕ್ರೆಡಿಟ್ ಕಾರ್ಡ್​ನಿಂದಲೂ ಕಟ್ಟಬಹುದು..!

ನಿಮ್ಮ ಖಾತೆಯಲ್ಲಿ ಹಣವಿಲ್ಲದೇ ಹೋದಲ್ಲಿ ನೀವು ಕ್ರೆಡಿಟ್ ಕಾರ್ಡ್​ನಿಂದಲೂ ಇನ್ಸ್ಟಾಪೀಸ್ ಮೂಲಕ ಶಾಲಾ ಶುಲ್ಕ ಕಟ್ಟ ಬಹುದು. ನೀವು ಕಟ್ಟಿದ ಹಣ ಶಾಲೆಯ ಪುಸ್ತಕ, ಸಮವಸ್ತ್ರ, ಪರೀಕ್ಷೆ ಹೀಗೆ ಮೂರ್ನಾಲ್ಕು ಭಾಗವಾಗಿ ಡಿವೈಡ್ ಆಗುತ್ತದೆ. ಮೊಬೈಲ್​ನಿಂದಲೂ ನೀವು ಪೇಮೆಂಟ್ ಮಾಡಬಹುದು.

ಕಂತುಗಳಲ್ಲೂ ಪೇಮೆಂಟ್ ಮಾಡಬಹುದು

ಈ ವೆಬ್​ಸೈಟ್​ನಲ್ಲಿ ಇಎಂಐ ಮೂಲಕವೂ ಶಾಲಾ ಫೀಸನ್ನು ಕಟ್ಟಬಹುದು. ತಿಂಗಳು, ಅಥವಾ ಆರು ತಿಂಗಳು ಹೀಗೆ ಶಾಲೆಯ ಆಡಳಿತ ವ್ಯವಸ್ಥೆ ನಿಗದಿಪಡಿಸಿರುವಂತೆ ಕಂತುಗಳು ಈ ವೆಬ್​ಸೈಟ್​ನಲ್ಲೂ ಲಭ್ಯವಿರುತ್ತವೆ. ಆ ಮೂಲಕ ಪೋಷಕರು ಅವರಿಗೆ ಅನುಕೂಲವಾಗುವ ಇಎಂಐನ್ನು ಈ ಇನ್ಸ್ಟಾಫೀಸ್​ನಿಂದ ಕಟ್ಟಬಹುದು. ಇದಕ್ಕಾಗಿ ಇನ್ಸ್ಟಾಫೀಸ್ ವತಿಯಿಂದ ಎಸ್ಎಂಎಸ್, ಮೇಲ್ ಮೂಲಕ ಪೋಷಕರನ್ನು ಅಲರ್ಟ್ ಸಹ ಮಾಡಲಾಗುವುದು. ಕ್ರೆಡಿಕಟ್ ಕಾರ್ಡ್ ಇದ್ದವರಿಗೆ ಮಾತ್ರ ಈ ಅವಕಾಶ ಬಳಸಿಕೊಳ್ಳಬಹುದು.

ಇನ್ಸ್ಟಾಫೀಸ್​ ಮೂಲಕ ಶಾಲಾ ಶುಲ್ಕ ಕಟ್ಟುವುದರಿಂದ ಪೋಷಕರಿಗೆ ಸಮಯ ಉಳಿತಾಯವಾಗುತ್ತದೆ. ಜೊತೆಗೆ ಕಟ್ಟಿದ ರಶೀದಿ ಕಳೆದು ಹೋಗುತ್ತದೆ ಎಂಬ ಭಯ ಇರುವುದಿಲ್ಲ. ಎಲ್ಲವೂ ಇ-ಮೇಲ್, ಎಸ್ಎಂಎಸ್ ರೂಪದಲ್ಲಿ ದಾಖಲೆಗಳು ಕೂಡ ಇರುತ್ತವೆ. ಇನ್ನು ನೀವು ಫೀಸ್ ಕಟ್ಟಿದ ಬಗ್ಗೆ ಶಾಲಾ ಆಡಳಿತ ಮಂಡಳಿಯ, ಪ್ರಾಂಶುಪಾಲರು, ಅಧ್ಯಕ್ಷರು ಹೀಗೆ ಎಲ್ಲರಿಗೂ ಮಾಹಿತಿ ಇರುತ್ತದೆ. ಇನ್ನು ಶಾಲೆಗೂ ಪ್ರತ್ಯೇಕ ಲೆಡ್ಜರ್ ಇಡುವಂತಹ ಪ್ರಮೇಯವೇ ಇರುವುದಿಲ್ಲ.

image


ಬ್ಯಾಗ್ ಪುಸ್ತಕಗಳು ಮನೆಗೆ..!

ಈ ವೆಬ್​ಸೈಟ್​ನಲ್ಲಿ ಬರೀ ಶಾಲಾ ಶುಲ್ಕ ಮಾತ್ರವಲ್ಲದೇ ಶಾಲೆಯ ಆರಂಭದ ಹಂತದಲ್ಲಿ ಮಕ್ಕಳ ಪುಸ್ತಕಕಗಳನ್ನು ಖರೀದಿ ಮಾಡುವುದು, ಬ್ಯಾಗ್ ಹೊಲಿಸುವುದು, ಸಮವಸ್ತ್ರ ರೆಡಿ ಮಾಡಿ ಅದನ್ನು ನಿಮ್ಮ ಮನೆಗೆ ಹೋಮ್ ಡೆಲಿವರಿ ಮಾಡುತ್ತಾರೆ. ಅಷ್ಟೇ ಅಲ್ಲದೇ ನಿಮಗೆ ಇವರು ಆಫ್​ಲೈನ್​ನಲ್ಲಿ ನಿಮ್ಮಿಂದ ಹಣ ಪಡೆದು ಅದನ್ನು ಶಾಲೆಗೆ ತಲುಪಿಸುವ ಕೆಲಸವನ್ನು ಸಹ ಮಾಡುತ್ತಾರೆ.

ಈ ಇನ್ಸ್ಟಾ ಫೀಸ್​ನಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಶಾಲೆಗಳು ನೊಂದಣಿಗೊಂಡಿವೆ. ಟಾಟಾ ಕ್ಲಾಸ್ಎಜ್( ಇ-ಲರ್ನಿಂಗ್)ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಜೈನ್ ಗ್ರೂಪ್ ಶಾಲೆಗಳು, ಜಯನಗರದ ಗುಪ್ತಾ ಕಾಲೇಜು, ಎನ್​ಸಿಎಸ್ಇ ಸ್ಕೂಲ್, ಧಾರವಾಡದ ಬಿಎಂಎಸ್ ಹೀಗೆ ಇನ್ನು ಅನೇಕ ಶಾಲಾ ಕಾಲೇಜುಗಳಿಗೆ ಇನ್ಸ್ಟಾಫೀಸ್ ಮೂಲಕ ಶುಲ್ಕ ಕಟ್ಟಬಹುದು. ಒಟ್ಟಿನಲ್ಲಿ ಇದರ ಮೂಲಕ ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವವರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಕಟ್ಟಬಹುದು.

ಇದನ್ನು ಓದಿ:

1. ಟೆಕ್ಕಿ ಹೈನುಗಾರನಾದ ಯಶೋಗಾಥೆ..!

2. 2 ಲಕ್ಷ ಯೂಸರ್ಸ್​ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!

3. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!