ನಿಮ್ಮೊಳಗಿನ ಉದ್ಯಮಿಯನ್ನು ಬಡಿದೆಬ್ಬಿಸುವ 5 ಟಿವಿ ಕಾರ್ಯಕ್ರಮಗಳು..!
ಟೀಮ್ ವೈ.ಎಸ್.ಕನ್ನಡ
ಸ್ವಂತ ಉದ್ಯಮ ಆರಂಭಿಸಿ, ಯಶಸ್ಸು ಪಡೆಯುವ ಉತ್ಸಾಹದಲ್ಲಿ ಎಲ್ರೂ ಹತ್ತಾರು ಪುಸ್ತಕಗಳನ್ನು ಓದ್ತಾರೆ. ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ತಾರೆ. ಆದ್ರೆ ಈ ಪಯಣದಲ್ಲಿ ದೃಶ್ಯ ಮಾರ್ಗದರ್ಶಿ ನಿಜಕ್ಕೂ ನಿಮಗೆ ಸಹಕಾರಿಯಾಗಬಲ್ಲದು. ಇತ್ತೀಚಿನ ಕೆಲ ವರ್ಷಗಳಲ್ಲಿ ಯುವ ಉದ್ಯಮಿಗಳು ನೋಡಲೇಬೇಕಾದಂತಹ, ಉದ್ಯಮಿಗಳು ಮತ್ತು ಉದ್ಯಮಶೀಲತೆಯ ಸುತ್ತ ಸುತ್ತುವ ಜನಪ್ರಿಯ ಟಿವಿ ಸಿರೀಸ್ಗಳು ಬಂದಿವೆ. ನಿಮ್ಮೊಳಗಿನ ಉದ್ಯಮಿಯನ್ನು ಬಡಿದೆಬ್ಬಿಸುವ ಅಂತಹ ಟಿವಿ ಕಾರ್ಯಕ್ರಮಗಳು ಯಾವುವು ಅನ್ನೋದನ್ನು ನೋಡೋಣ.

ಟಿವಿಎಫ್ ಪಿಚ್ಚರ್ಸ್..
ಇದು ರಿಲೀಸ್ ಆಗಿದ್ದು 2015ರಲ್ಲಿ. ಡ್ರಾಮಾ ಮತ್ತು ಕಾಮಿಡಿ ಹೂರಣವುಳ್ಳ ಕಥೆ ಉದ್ಯಮಗಳ ಸುತ್ತ ಕೂಡ ಸುತ್ತುತ್ತೆ. ಕಾರ್ಪೊರೇಟ್ ದುನಿಯಾದಲ್ಲಿರುವ ನಾಲ್ಕು ಯುವಕರ ಕಥೆ ಇದು. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೆಲಸ, ಲಂಚ್, ಕಾಫಿ ಬ್ರೇಕ್ನಲ್ಲಿ ಸ್ಮೋಕಿಂಗ್. ವೀಕೆಂಡ್ಗಳಲ್ಲಿ ಕೊಂಚ ರಿಲ್ಯಾಕ್ಸ್, ಸೋಮವಾರದಿಂದ ಮತ್ತದೇ ಯಾಂತ್ರಿಕ ಕೆಲಸ. ಪೈಲಟ್ ಎಪಿಸೋಡ್ನಿಂದ್ಲೇ ಇದು ವೀಕ್ಷಕರ ಮನಗೆದ್ದಿತ್ತು. ಯಾಕಂದ್ರೆ ಕಥಾನಾಯಕ ನವೀನ್, ಕಂಠಪೂರ್ತಿ ಕುಡಿದು ಬಾಸ್ಗೆ ಮಧ್ಯರಾತ್ರಿ ಕರೆ ಮಾಡ್ತಾನೆ, ಕೆಲಸಕ್ಕೆ ಗುಡ್ಬೈ ಹೇಳ್ತಾನೆ. ಮರುದಿನ ಬೆಳಗ್ಗೆ ಅದೃಷ್ಟ ಅವನ ಮನೆಬಾಗಿಲಿಗೇ ಬಂದಿತ್ತು. ತಿಂಗಳ ಹಿಂದೆ ಆಪ್ತ ಸ್ನೇಹಿತರ ಜೊತೆಗೂಡಿ ಮಾಡಿದ್ದ ಐಡಿಯಾಗೆ ಹೊಸ ರೂಪ ಸಿಕ್ಕಿತ್ತು. ಕಥೆಯಲ್ಲಿ ಏರಿಳಿತಗಳಿತ್ತು. ಉದ್ಯೋಗ ಬಿಡುವಂತೆ ನವೀನ್ ಸ್ನೇಹಿತರಲ್ಲಿ ಮನವಿ ಮಾಡ್ತಾನೆ. ಹೂಡಿಕೆದಾರರನ್ನು ಹುಡುಕೋದು ಕಷ್ಟವಾಗತ್ತೆ. ಮೊದಲ ಬಾರಿ ಸಂಸ್ಥಾಪಕ ಎದುರಿಸುವ ಎಲ್ಲ ಸಮಸ್ಯೆಗಳು ಅನುಭವಗಳನ್ನು ಯಥಾವತ್ತಾಗಿ ತೋರಿಸಲಾಗಿದೆ. ಹಾಸ್ಯಮಯ ಪಾತ್ರಗಳ ಮೂಲಕ ಧಾರಾವಾಹಿ ಗಮನಸೆಳೆಯುತ್ತೆ. ಮೊದಲ ಬಾರಿ ಉದ್ಯಮಿಯಾಗಲು ಹೊರಟವರೆಲ್ಲ ಟಿವಿಎಫ್ ಪಿಚ್ಚರ್ಸ್ ಅನ್ನು ನೋಡಲೇಬೇಕು.
ಸಿಲಿಕಾನ್ ವ್ಯಾಲಿ...
1999ರ ಪೈರಟ್ಸ್ ಆಫ್ ಸಿಲಿಕಾನ್ ವ್ಯಾಲಿ ಬಗ್ಗೆ ನಾವಿಲ್ಲಿ ಮಾತನಾಡ್ತಿಲ್ಲ. ಸಿಲಿಕಾನ್ ವ್ಯಾಲಿ 2014ರಲ್ಲಿ ಬಿಡುಗಡೆಯಾದ ಟಿವಿ ಸಿರೀಸ್. ಸಿಲಿಕಾನ್ ವ್ಯಾಲಿಯ ಬದುಕಿನ ಆಂತರಿಕ ರೂಪವನ್ನು ಪ್ರದರ್ಶಿಸುವ ಹಾಸ್ಯ ಸರಣಿ ಇದು. ಭಾರೀ ಪೈಪೋಟಿಯಿಂದ ಕೂಡಿರುವ ಉದ್ಯಮ ಜಗತ್ತಿನಲ್ಲಿ ಸ್ವಂತ ಕಂಪನಿಯೊಂದನ್ನು ಕಟ್ಟಿ ಬೆಳೆಸುವ 6 ಯುವಕರ ಕುರಿತಾದ ಚಿತ್ರಕಥೆ. ಸಿಲಿಕಾನ್ ವ್ಯಾಲಿಯ ಮೂರನೇ ಸೀಸನ್ ಕೂಡ ಸೂಪರ್ ಹಿಟ್ ಎನಿಸಿಕೊಂಡಿದೆ. 2017ರಲ್ಲಿ ನಾಲ್ಕನೇ ಸರಣಿ ಪ್ರೇಕ್ಷಕರ ಮುಂದೆ ಬರಲಿದೆ.
ಸ್ಟಾರ್ಟಪ್...
ಆ್ಯಡಮ್ ಬ್ರಾಡಿ ಹಾಗೂ ಮಾರ್ಟಿನ್ ಫ್ರೀಮ್ಯಾನ್ ಸ್ಟಾರ್ಟಪ್ನ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ವರ್ಷಾಂತ್ಯದಲ್ಲಿ ತೆರೆಗೆ ಬರುತ್ತಿರುವ ಈ ಟಿವಿ ಶೋನ ಪ್ರಮುಖ ಆಕರ್ಷಣೆ ಅಂದ್ರೆ ಪಾತ್ರಧಾರಿಗಳು. ಅನನ್ಯ ಹಾಗೂ ಆಸಕ್ತಿದಾಯಕ ಪರಿಕಲ್ಪನೆ ಇದಕ್ಕೆ ಜೀವ ತುಂಬಿದೆ. ಬ್ರೂಕ್ಲಿನ್ನ ಬ್ಯಾಂಕರ್, ಒಬ್ಬ ಗ್ಯಾಂಗ್ ಲಾರ್ಡ್, ಕ್ಯೂಬಾದ ಹ್ಯಾಕರ್ ಒಟ್ಟಾಗಿ ಉದ್ಯಮ ಲೋಕಕ್ಕೆ ಕಾಲಿಡುತ್ತಾರೆ. ಮಲ್ಟಿ ಬಿಲಿಯನ್ ಡಾಲರ್ ಮೊತ್ತದ ವಹಿವಾಟು ನಡೆಸಲು `ಡಿಜಿಟಲ್ ಕರೆನ್ಸಿ' ಆಯ್ದುಕೊಳ್ತಾರೆ. ಇದು ಭವಿಷ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದಲ್ಲವೇ? ಮುಂದೇನಾಗುತ್ತೆ ಅನ್ನೋದನ್ನು ನಾವು ಕಾದು ನೋಡ್ಬೇಕು.
ಹೌ ಐ ಮೇಡ್ ಮೈ ಮಿಲಿಯನ್ಸ್...
ಇದು ಸಿಎನ್ಬಿಸಿಯ ಜನಪ್ರಿಯ ಕಾರ್ಯಕ್ರಮ. ಉದ್ಯಮ ಜಗತ್ತಿನ ಗ್ರೀನ್ ರೂಮ್ ಕಡೆಗೆ ನಿಮ್ಮನ್ನು ಇದು ಕರೆದೊಯ್ಯುತ್ತದೆ. ಅಲ್ಲಿ ಪರದೆಯ ಪತನದ ನಂತರ ಪುರುಷ ಮತ್ತು ಮಹಿಳಾ ಉದ್ಯಮಿಗಳು, ಸಾಮಾನ್ಯ ಐಡಿಯಾದ ಮೂಲಕ ತಾವು ಅಸಾಮಾನ್ಯ ಬ್ಯುಸಿನೆಸ್ ಮಾಡಿದ್ಹೇಗೆ ಅನ್ನೋದನ್ನು ಬಿಚ್ಚಿಡುತ್ತಾರೆ. ಬಹುತೇಕ ಕೇಂದ್ರಗಳೆಲ್ಲ 1 ಮಿಲಿಯನ್ ಡಾಲರ್ ವಹಿವಾಟು ನಡೆಸಿವೆ. 2011ರಲ್ಲಿ ಪ್ರಸಾರವಾದ `ಹೌ ಐ ಮೇಡ್ ಮೈ ಮಿಲಿಯನ್ಸ್' ಪಕ್ಕಾ ಅಮೆರಿಕದ ಕನಸನ್ನು ಬಿಚ್ಚಿಟ್ಟಿದೆ. ನಿಮ್ಮಲ್ಲಿರುವ ಅಂತಹ ಪರಿಕಲ್ಪನೆಗಳು, ಸಂಪನ್ಮೂಲ, ಮನೋಬಲವನ್ನು ಬಡಿದೆಬ್ಬಿಸಿದೆ.
ದಿ ಪ್ರಾಫಿಟ್...
ಅತ್ಯಂತ ಜನಪ್ರಿಯವಾದ ಕಾರ್ಯಕ್ರಮವಿದು. ಯಶಸ್ವಿ ಉದ್ಯಮಿಯಾದ್ರೆ ಮಾತ್ರ ಸಾಲದು ಎಂಬ ಸಂದೇಶವನ್ನು ದಿ ಪ್ರಾಫಿಟ್ ಸಾರಿದೆ. ಸ್ವಂತ ಉದ್ಯಮದಲ್ಲಿ ಎದುರಾಗುವ ಸವಾಲು ಮತ್ತು ಕಠಿಣ ಪರಿಸ್ಥಿತಿಗಳನ್ನು ಯಥಾವತ್ತಾಗಿ ಚಿತ್ರಿಸಿದೆ. ಉದ್ಯಮ ಲೋಕದ ತಿಮಿಂಗಿಲ ಎಂದೇ ಹೆಸರಾದ ಉದ್ಯಮಿ ಮಾರ್ಕಸ್ ಲೆಮೊನಿಸ್ ಅವರ ನಿಜ ಜೀವನದ ಕಹಾನಿ. ಸಂಕಷ್ಟದಲ್ಲಿರುವ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ, ವ್ಯಾಪಾರ ಮತ್ತು ಲಾಭ ಎರಡರಲ್ಲೂ ಶೇಕಡಾವಾರು ಪ್ರತಿಫಲ ಸಿಗುವಂತೆ ಮಾಡುವುದು ಹೇಗೆ ಅನ್ನೋದೇ ಈ ಟಿವಿ ಶೋದ ಹೂರಣ. ಎಲ್ಲ ಉದ್ಯಮಿಗಳಿಗೂ ಇದೊಂದು ಪಾಠವಾಗಬಲ್ಲದು. ಕಾರ್ಯಕ್ರಮದ ಮೊದಲ ಭಾಗದಲ್ಲಿ ಉದ್ಯಮಿಯೊಬ್ಬ ಏನೆಲ್ಲ ಮಾಡಬಾರದು ಅನ್ನೋದನ್ನು ಅವರು ತೋರಿಸ್ತಾರೆ. ಈ ಕಾರ್ಯಕ್ರಮದ ಪ್ರಮುಖ ಗುರಿ 3 `ಪಿ'ಗಳನ್ನು ಒಳಗೊಂಡಿದೆ : ಪೀಪಲ್, ಪ್ರೊಸೆಸ್, ಪ್ರಾಡಕ್ಟ್. ಯಾವುದೇ ಸ್ಟಾರ್ಟಪ್ನ ಸಂಸ್ಥಾಪಕ ಅಥವಾ ಸದಸ್ಯನಿಗೆ ಇವು ಮೂರು ಯಶಸ್ಸಿನ ಮಂತ್ರಗಳು.
ನಮ್ಮ ಈ ಐದು ಆಯ್ಕೆಗಳು ಸೂಕ್ತ ಎನಿಸಿದಲ್ಲಿ ಇನ್ಯಾಕೆ ತಡ ಅತ್ಯದ್ಭುತ ಮನರಂಜನೆ ಮತ್ತು ಶಿಕ್ಷಣ ಒದಗಿಸುವ ಈ ಕಾರ್ಯಕ್ರಮಗಳನ್ನು ವೀಕ್ಷಿಸಿ. ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ಹಂಚಿಕೊಳ್ಳಿ.
ಇದನ್ನೂ ಓದಿ...
ವಾಟ್ಸ್ಆ್ಯಪ್ ಮೂಲಕ 1.62 ಕೋಟಿ ಮೌಲ್ಯದ ಆಭರಣ ಸೇಲ್ : ಗ್ರಾಹಕರ ಮನಗೆದ್ದ ವೆಲ್ವೆಟ್ ಕೇಸ್.ಕಾಮ್